ಭಾನುವಾರ, ಮಾರ್ಚ್ 3, 2013

ಪಯಣ




ನಾನೊಬ್ಬ ಪಯಣಿಗ
ಇಟ್ಟ ಹೆಜ್ಜೆ  ಗುರುತು 
ಇನ್ನೂ ಮಾಸಿಲ್ಲ,

ಬೆಟ್ಟ ಗುಡ್ಡದ ಈ ಪಯಣ
ಮಂಜಿನೊಂದಿಗೆ

ಕರಗುವುದೋ ಗೊತ್ತಿಲ್ಲ.

ಕಾಲಗರ್ಭ ತಡಿಯಲ್ಲಿ
ಚಳಿಯದ್ದೇ ಕಾರುಬಾರು,
ಕೊರೆವ ಮಂಜಿನಡಿ
ಸುಳಿಯುತಲಿವೆ

ತಕರಾರು...
ಹೇಗೆ ತಾನೇ ಸಾಗಲಿ ?

ಭಾರವಾಗಿದೆ  ಮನಸು,
ಅರಿವಿಲ್ಲದೆ ಹೊರಟಿದೆ ದೇಹ,
ಇನ್ನು ಹಲವು ಹೆಜ್ಜೆಗಳ ಪಯಣಕೆ
ಮಂಜು ಕೂಡ ಕಲ್ಲಾಗಿದೆ ..!

ಜೀವನ ಬೇಸರಿಸಿದೆ,
ನೀನಿಲ್ಲದ  ಪಯಣ
ಬೇಡವಾಗಿದೆ,

ನನ್ನ ಬಾಳು ಪಲ್ಲವಿ ಇಲ್ಲದ ಚರಣ
ಈಗ ತಾನಾಗಿದೆ.


ಸಾಗಲೇಬೇಕು
ಯಾಕೆಂದರೆ,
ನನ್ನದು ಒಂದು ಜೀವನ.
ಹಾದಿ ಕಲ್ಲು, ಮುಳ್ಳು, ಬೆಟ್ಟ,  
ಮಂಜಾದರೇನು..
ಗುರಿ ಮುಟ್ಟಲೇಬೇಕು,
ದಡ ಸೇರಲೇಬೇಕು !



      -ರಾಜೇಂದ್ರ  ಅ .ಹುನಗುಂದ,