ಭಾನುವಾರ, ಮಾರ್ಚ್ 3, 2013

ಪಯಣ




ನಾನೊಬ್ಬ ಪಯಣಿಗ
ಇಟ್ಟ ಹೆಜ್ಜೆ  ಗುರುತು 
ಇನ್ನೂ ಮಾಸಿಲ್ಲ,

ಬೆಟ್ಟ ಗುಡ್ಡದ ಈ ಪಯಣ
ಮಂಜಿನೊಂದಿಗೆ

ಕರಗುವುದೋ ಗೊತ್ತಿಲ್ಲ.

ಕಾಲಗರ್ಭ ತಡಿಯಲ್ಲಿ
ಚಳಿಯದ್ದೇ ಕಾರುಬಾರು,
ಕೊರೆವ ಮಂಜಿನಡಿ
ಸುಳಿಯುತಲಿವೆ

ತಕರಾರು...
ಹೇಗೆ ತಾನೇ ಸಾಗಲಿ ?

ಭಾರವಾಗಿದೆ  ಮನಸು,
ಅರಿವಿಲ್ಲದೆ ಹೊರಟಿದೆ ದೇಹ,
ಇನ್ನು ಹಲವು ಹೆಜ್ಜೆಗಳ ಪಯಣಕೆ
ಮಂಜು ಕೂಡ ಕಲ್ಲಾಗಿದೆ ..!

ಜೀವನ ಬೇಸರಿಸಿದೆ,
ನೀನಿಲ್ಲದ  ಪಯಣ
ಬೇಡವಾಗಿದೆ,

ನನ್ನ ಬಾಳು ಪಲ್ಲವಿ ಇಲ್ಲದ ಚರಣ
ಈಗ ತಾನಾಗಿದೆ.


ಸಾಗಲೇಬೇಕು
ಯಾಕೆಂದರೆ,
ನನ್ನದು ಒಂದು ಜೀವನ.
ಹಾದಿ ಕಲ್ಲು, ಮುಳ್ಳು, ಬೆಟ್ಟ,  
ಮಂಜಾದರೇನು..
ಗುರಿ ಮುಟ್ಟಲೇಬೇಕು,
ದಡ ಸೇರಲೇಬೇಕು !



      -ರಾಜೇಂದ್ರ  ಅ .ಹುನಗುಂದ,

ಬುಧವಾರ, ಜನವರಿ 2, 2013

ಬಲಿಪಶು

ಹೆಣ್ಣುಮಕ್ಕಳ ಉಡುಗೆ ತೊಡುಗೆಗಳು ಮತ್ತು ಅವರ ಪ್ರಚೋಧನಕಾರಿ ಹಾವಭಾವಗಳು ಅತ್ಯಾಚಾರಿಗಳಿಗೆ ಪ್ರೇರೇಪಿಸುವುದಿಲ್ಲ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ನಾವು ಇಲ್ಲಿ ಗಮನಿಸಬೇಕಾದ್ದು ಕಂದಮ್ಮಗಳು, ವೃದ್ದೆಯರು, ಮಾನಸಿಕ ಅಸ್ವಸ್ಥೆಯರು ಅತ್ಯಾಚಾರಿಗಳಿಗೆ ಅಸಹಾಯಕ ಬಲಿಪಶುಗಳು ಅಷ್ಟೇ ಆದರೆ ತುಂಡುಡುಗೆ ತೊಟ್ಟು, ಮಾಧಕ ಹಾವಭಾವಗಳಿಂದ ಸಮಾಜದ  ಸ್ವಾಸ್ಥ್ಯ ಹದಗೆಡಲು ಕಾರಣರಾಗುತ್ತಿರುವ  ಸೆಲೆಬ್ರಿಟಿಗಳು  ಅತ್ಯಾಚಾರಿಗಳಿಗೆ ಪ್ರೇರಿತರು ಎಂಬ ಮಾತು ಅಷ್ಟೇ ಸತ್ಯ.  ಸಿನೆಮಾ, ಟೀವಿ ಮಾಧ್ಯಮ, ಇಂಟರ್ನೆಟ್, ಪತ್ರಿಕೆಗಳಲ್ಲಿ ಕಾಣಸಿಗುವ ಸೆಲೆಬ್ರಿಟಿಗಳ, ಸಿನಿಮಾ ಮಣಿಯರ ಮತ್ತು ಅಧುನಿಕ ಹುಡುಗಿಯರ  ಉತ್ತೇಜಕ ಹಾವಭಾವಗಳಿಂದ ಯುವಜನತೆ ದಾರಿ ತಪ್ಪುತ್ತಿದೆ. ಇಲ್ಲಿ ಎಲ್ಲ ಹೆಣ್ಣುಮಕ್ಕಳನ್ನು ದೂಷಿಸುವುದು ನನ್ನ ಉದ್ದೇಶವಲ್ಲ ಇಡೀ ನಾಗರೀಕ ಸಮಾಜ ಬದಲಾಗಬೇಕಾದ ಅವಶ್ಯಕತೆ ಇದೆ ಎನ್ನುವುದಷ್ಟೇ ನನ್ನ ಆಶಯ.