ಗುರುವಾರ, ನವೆಂಬರ್ 3, 2011



ಮತ್ತೆ ರಾಜ್ಯದಲ್ಲಿ ಉಪಚುನಾವಣೆ ಪ್ರಹಸನ ಶುರುವಾಗಿದೆ. ಮೊನ್ನೆ ತಾನೇ ಕೊಪ್ಪಳ ಉಪಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಕಂಡಿದ್ದ ಆಡಳಿತ ಮತ್ತು ಪ್ರತಿಪಕ್ಷಗಳು ಇಂದು ಬಳ್ಳಾರಿ ಗ್ರಾಮೀಣ ಉಪಚುನಾವಣೆ ನೆಪದಲ್ಲಿ ಮತ್ತೆ ಕಣಕ್ಕೆ ಇಳಿಯಲಿವೆ.
ಶ್ರೀರಾಮುಲುರವರು ರಾಜಿನಾಮೆ ನೀಡಿದ ಉದ್ದೇಶವೇ ಸ್ಪಷ್ಟವಾಗಿಲ್ಲ. ಲೋಕಾಯುಕ್ತರು ತಮ್ಮ ಹೆಸರನ್ನು ಗಣಿ ಆಕ್ರಮದಲ್ಲಿ ಉಲ್ಲೇಖಿಸಿದ್ದು, ಇದರಿಂತ ಮನನೊಂದು ರಾಜೆನಾಮೆ ನೀಡಿದೆ ಅಂತ ಹೇಳುವ ಇವರು, ತಮ್ಮ ವೈಯಕ್ತಿಕ ವಿಚಾರಗಳಿಗಾಗಿ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಜನರನ್ನು ಎಳೆತರುವುದು ಯಾವ ನ್ಯಾಯ ಸ್ವಾಮಿ. ? ಇವರು ಜನರನ್ನು ಕುರಿಗಳೆಂದೇ ಭಾವಿಸಿರುವಂತಿದೆ. ಚುನಾವಣೆಯಲ್ಲಿ ವೃಥಾ ವೆಚ್ಚವಾಗುವ ಕೋಟ್ಯಾಂತರ ಹಣವನ್ನು ಬಡ ಜನರಿಗೆ ಸೂರು ಕಲ್ಪಿಸಲು ಉಪಯೋಗಿಸಬಹುದಲ್ಲವೇ ?. ಮೊನ್ನೆ ಕೊಪ್ಪಳ, ಇಂದು ಬಳ್ಳಾರಿ ನಾಳೆ ಮತ್ತೊಂದು. ಹೀಗೆ ಹಣ ಪೋಲಾಗಿಸುವುದು ಬಿಟ್ಟು ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಲಕ್ಷ್ಯ ವಹಿಸುವುದು ಒಳಿತು.
ಪಕ್ಷಗಳ ನಾಯಕರು ಜನರಿಗೆ ಹಣ ಹಂಚುವುದು ಮತ್ತೆ ಅಧಿಕಾರಕ್ಕೆ ಬರುವುದೇ ಪ್ರತಿಷ್ಠೆ ಎಂದುಕೊಂಡಂತಿದೆ. ಶ್ರೀರಾಮುಲುರವರು ಅಧಿಕಾರದಲ್ಲಿದ್ದಾಗ ಮಾಡಲಾಗದ ಕ್ಷೇತ್ರದ ಸಾಧನೆ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಆಗುತ್ತದೆಯೇ ? ಇದು ಕೇವಲ ಜನರನ್ನು ಹಾದಿ ತಪ್ಪಿಸುವ ಮತ್ತು ರಾಜ್ಯದ ಗಮನ ತಮ್ಮತ್ತ ಸೆಳೆಯುವ ಉದ್ದೇಶವಲ್ಲದೆ ಮತ್ತೇನು ? ವೃಥಾ ಪ್ರತಿಷ್ಠೆಯ ವಿಷಯ ಬಿಟ್ಟು ನಿಮ್ಮನ್ನು ನಂಬಿದ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ, ಜನರ ವಿಶ್ವಾಸ ಗಳಿಸಿ.

ಮಂಗಳವಾರ, ನವೆಂಬರ್ 1, 2011

ಕನ್ನಡ ರಾಜ್ಯೋತ್ಸವ




ಭಾರತವು ಭಾಷಾಂತರದ ಆಧಾರದ ಮೇಲೆ ರಾಜ್ಯಗಳು ವಿಭಾಗಗೊಂಡ ನಂತರ 1950 ರಲ್ಲಿ ಗಣತಂತ್ರವಾಗಿ ಮಾರ್ಪಾಡಾಯಿತು. ನವೆಂಬರ್ 1, 1956 ರಂದು ಹಾಗೆ ಮಾರ್ಪಾಡುಗೊಂಡ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೈಸೂರು ಒಂದು. ಹಲವಾರು ರಾಜರುಗಳ ಆಳಿದ ಪ್ರಾಂತ್ಯಗಳ ಪ್ರಕಾರ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಎಂದು ವರ್ಗೀಕರಿಸಿ ಹೆಸರಿಸಲಾಯಿತು. ಆದರೆ ಉತ್ತರ ಕರ್ನಾಟಕ, ಮತ್ತು ಹೈದರಾಬಾದ್ ಕರ್ನಾಟಕ ದ ಜನರು ಮೈಸೂರು ರಾಜ್ಯವನ್ನು ಒಪ್ಪಲಿಲ್ಲ. ಹಲವಾರು ಸಭೆಗಳ ನಂತರ ನವೆಂಬರ್ 1, 1973 ರಲ್ಲಿ ಕರ್ನಾಟಕ ಎಂಬ ರಾಜ್ಯವು ಅಸ್ತಿತ್ವದಲ್ಲಿ ಬಂತು.


ದಿವಂಗತ ದೇವರಾಜ್ ಅರಸ್ ರಾಜ್ಯದ ಮೊದಲ ಮುಖ್ಯಮಂತ್ರಿಯಾದ ನಂತರ ಅಧಿಕೃತವಾಗಿ ನವೆಂಬರ್ 1 ರಂದು ರಾಜ್ಯದ ಹುಟ್ಟು ದಿನವಾಗಿ ಆಚರಿಸಲು ಪ್ರಾರಂಭಿಸಲಾಯಿತು. ಅದೇ ನಾವು ಇಂದು ಆಚರಿಸುವ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ. ತಿಂಗಳುವಿಡಿ ರಾಜ್ಯದ ಒಗ್ಗಟ್ಟನ್ನು ಪ್ರದರ್ಶಿಲಾಗುತ್ತದೆ. ಸರ್ಕಾರವು ಅಂದು ರಜೆಯನ್ನು ಘೋಷಿಸಿ ರಾಜ್ಯದ ಸಂಭ್ರಮಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಮಾತ್ರವಲ್ಲದೆ ರಾಜ್ಯದಾದ್ಯಂತ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿ ಕನ್ನಡ ರಾಜ್ಯೋತ್ಸವದ ಸೊಬಗನ್ನು ಹೆಚ್ಚಿಸಿ ಅತೀ ಹೆಚ್ಚು ಜ್ಞಾನಪೀಠಗಳನ್ನೂ ಪಡೆದ ಶ್ರೇಯಸ್ಸು ಕನ್ನಡಕ್ಕೆ ಲಭಿಸಿದೆ.